भारतीय भाषाओं द्वारा ज्ञान

Knowledge through Indian Languages

Dictionary

Krishi Rasayanashastra Shabdartha Nirupanavali (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous123Next >

Manure

ಗೊಬ್ಬರ.
ಸಸ್ಯ ಅಥವಾ ಪ್ರಾಣಿ ಮೂಲಗಳಿಂದ ಉಂಟಾದ, ಬೆಳೆ ಉತ್ಪತ್ತಿಯನ್ನು ಹೆಚ್ಚಿಸಲು ಉಪಯೋಗಿಸುವ, ಕಳಿತ ಸಾವಯವ ವಸ್ತುಗಳು.

Magnesia

ಮೆಗ್ನೀಸಿಯಾ.
ಸುಣ್ಣದ ಕಲ್ಲಿನಲ್ಲಿ, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಂ ಕಾರ್ಬೋನೆಟ್ ಜೊತೆ ಇರುತ್ತದೆ. ಇದರಿಂದ ತಯಾರಿಸಿದ, ಶೇಕಡ 10 ರಿಂದ 15 ರಷ್ಟು ಮೆಗ್ನೀಸಿಯಂ ಕಾರ್ಬೊನೇಟ್ ಇರುವ ಸುಣ್ಣ.

Magnification

ವರ್ಧನೆ
ವರ್ಧನೆಯನ್ನು ಈ ಕೆಳಗಿನ ಸೂತ್ರದಿಂದ ಅಳೆಯಬಹುದು.
M = P ➗ Q [(25 cms ➗ Fe)+1]
P ಮತ್ತು Q = ಮೊದಲ ಪ್ರತಿಮೆ ಮತ್ತು ವಸ್ತುಗಳ ದೂರ (ಗುರಿಯಿಂದ).
Fe = ನೇತ್ರ ಮಸೂರದಿಂದ ಸಂಗಮ ಬಿಂದುವಿನ ದೂರ.

Mass

ದ್ರವ್ಯರಾಶಿ.
ಒಂದು ವಸ್ತುವಿನಲ್ಲಿರುವ ಪರಿಮಾಣಕ್ಕೆ ದ್ರವ್ಯರಾಶಿ ಎಂದು ಹೆಸರು.

Matter

ದ್ರವ್ಯ.
ಸ್ಥಳವನ್ನು ಆವರಿಸಿಕೊಳ್ಳುವ ಮತ್ತು ಒಂದು ನಿರ್ದಿಷ್ಟ ಪರಿಮಾಣವುಳ್ಳ ವಸ್ತು.

Marine Soil

ಕಡಲ ಮಣ್ಣು.
ಸಾಗರ ಮತ್ತು ಸಮುದ್ರಗಳ ನೀರಿನಿಂದ ಶೇಖರವಾದ ವಸ್ತುಗಳಿಂದ ಉಂಟಾದ ಮಣ್ಣು.

Marl

ಚಿಪ್ಪು ವಸ್ತು.
ಪ್ರಕೃತಿಯಲ್ಲಿ, ನೀರಿನ ತಳದಲ್ಲಿ ಶೇಖರವಾಗಿರುವ ಕ್ಯಾಲ್ಸಿಯಂ ಕಾರ್ಬೊನೇಟ್.

Mature Soil

ಪಕ್ವಮಣ್ಣು; ಬೆಳೆದ ಮಣ್ಣು.
ಸ್ವಾಭಾವಿಕ ಮಣ್ಣು ಉತ್ಪಾದನಾ ವಿಧಾನಗಳಿಂದುಟಾದ ಸಂಪೂರ್ಣ ಪಕ್ವ ಹೊಂದಿದ ಮಣ್ಣು.

Major Plant Nutrients

ಪ್ರಧಾನ ಸಸ್ಯಪೋಷಕಗಳು.
ಸಾರಜನಕ, ರಂಜಕ ಮತ್ತು ಪೊಟ್ಯಾಷ್ ಇವು ಪ್ರಧಾನ ಸಸ್ಯಪೋಷಕಗಳು. ಸಸ್ಯ ಪೋಷಣೆ ಮತ್ತು ಅವುಗಳ ಬೆಳವಣಿಗೆಯಲ್ಲಿ ಇವುಗಳ ಪಾತ್ರ ಅತಿ ಮುಖ್ಯ. ಮಣ್ಣಿನಲ್ಲಿ ಇವುಗಳ ಅಂಶ ಅಷ್ಟೇನೂ ಹೆಚ್ಚಿಲ್ಲ; ಆದರೆ ಸಸ್ಯಗಳಿಗೆ ಇವು ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲೇ ಅಗತ್ಯ. ಸಾಗುವಳಿಯಲ್ಲಿ ಇವುಗಳ ಸರಬರಾಜಾಗದಿದ್ದರೆ, ಕೊರತೆಯುಂಟಾಗಿ ಸಸ್ಯ ಬೆಳವಣಿಗೆ ಹಿಂದಾಗುತ್ತದೆ.

Marshy Land

ಜೌಗು ಜಮೀನು; ಜವಳು ಭೂಮಿ.
ನೀರು ಬಸಿಯುವುದಕ್ಕೆ ಅವಕಾಶವಿಲ್ಲದ ಕಾರಣ ಸದಾ ತೇವವಾಗಿರುವ ಭೂ ಸನ್ನಿವೇಶ. ಇಂಥ ಸ್ಥಿತಿಗೆ ಹೊಂದಿಕೊಂಡು ಬದುಕಬಲ್ಲ ಕೆಲವು ಜಲಸಸ್ಯಜಾತಿ ಈ ಭೂಮಿಗಳ ವೈಶಿಷ್ಟ್ಯ.

Maximum Water Holding Capacity

ಗರಿಷ್ಠ ನೀರು ಹಿಡಿಯುವ ಶಕ್ತಿ.
ಒಣಗಿದ ಒಂದು ಗೊತ್ತಾದ ತೂಕದ ಮಣ್ಣನ್ನು ನೀರಿನಲ್ಲಿ ಮುಳುಗಿಸಿದಾಗ, ಆ ಮಣ್ಣು ಹೀರಿಕೊಳ್ಳುವ ನೀರಿನ ಮೊತ್ತಕ್ಕೆ ಗರಿಷ್ಠ ನೀರು ಹಿಡಿಯುವ ಶಕ್ತಿ ಎಂದು ಹೆಸರು.

Mechanical Effeciency

ಯಾಂತ್ರಿಕ ಕಾರ್ಯ ಸಮರ್ಥತೆ.
ಒಂದು ಯಂತ್ರದಿಂದ ನಾವು ಹೊಂದಬಹುದಾದ ಕೆಲಸಕ್ಕೂ ಅದಕ್ಕೆ ನಾವು ಒದಗಿಸಬೇಕಾದ ಕೆಲಸಕ್ಕೂ ಇರುವ ಅನುಪಾತವನ್ನು ಯಂತ್ರದ ಕಾರ್ಯಸಮರ್ಥತೆ ಎಂದು ಕರೆಯುತ್ತಾರೆ.

Medium Textured Soil

ಮಧ್ಯಮಸ್ವರೂಪ ಮಣ್ಣು.
ನವಿರು ಮತ್ತು ಒರಟು ಮಣ್ಣುಗಳ ಮಧ್ಯಾಂತರ ಮಣ್ಣು. ಅತಿ ನವಿರು ಮರಳು ಮಣ್ಣು, ಜೇಡಿಗೋಡು ಮಣ್ಣು ಈ ಗುಂಪಿಗೆ ಸೇರಿದವು.

Mesans

ಮೆಸಾನ್ಸ್.
ವಿರೋಧಕರ ಮತ್ತು ಅವಿರೋಧಕರ ಮೆಸಾನ್ಸ್ ಗಳು ಎಲೆಕ್ಟ್ರಾನ್ ಗಳಿಗೆ ಸಮವಾದ ಶಕ್ತಿಯುಳ್ಳ ಮೂಲಕಣಗಳು. ಇವುಗಳ ಇರುವಿಕೆಯನ್ನು ಕಾಸ್ಮಿಕ್ ಕಿರಣಗಳಿಂದ ಕಂಡು ಹಿಡಿಯಬಹುದು.

Metal and Non metal

ಲೋಹ ಮತ್ತು ಅಲೋಹ.
ಎಲ್ಲಾ ಲೋಹಗಳು ವಿದ್ಯುತ್ ವಾಹಿಗಳನ್ನು ಕೊಡುತ್ತವೆ. ಎಲ್ಲಾ ಅಲೋಹಗಳೂ ವಿದ್ಯುತ್ ವಾಹಿಗಳನ್ನು ಸ್ವೀಕರಿಸುತ್ತವೆ.

Mechanical Analysis of Soil

ಮಣ್ಣಿನ ಯಾಂತ್ರಿಕ ವಿಶ್ಲೇಷಣೆ.
ಒಂದು ಮಣ್ಣಿನಲ್ಲಿರುವ ವಿವಿಧ ಗಾತ್ರದ ಕಣಗಳನ್ನು ಬೇರ್ಪಡಿಸುವ ಭೌತಿಕ ವಿಧಾನ. ಈ ವಿಶ್ಲೇಷಣಾಕ್ರಮದಿಂದ ಮಣ್ಣಿನ ಮರಳು, ಒಂಡು ಮತ್ತು ಜೇಡಿ ಅಂಶಗಳನ್ನು ಕಂಡು ಹಿಡಿಯಬಹುದು.

Meditranian Climate

ಮೆಡಿಟರೇನಿಯನ್ ವಾಯುಗುಣ; ಭೂಮಧ್ಯಸಾಗರ ವಾಯುಗುಣ.
ಉಷ್ಣಗಾಲದಲ್ಲಿ ಒಣ ಮತ್ತು ಚಳಿಗಾಲದಲ್ಲಿ ಶೀತ ವಾತಾವರಣವಿರುವ ವಾಯುಗುಣ.

Metabolism

ಜೀವದ್ರವ್ಯ ಪರಿಣಾಮ.
ಆಹಾರ ಹೀರಲ್ಪಟ್ಟನಂತರ ಪ್ರಾಣ ಅಥವಾ ಸಸ್ಯ ದೇಹದಲ್ಲಿ ಜರುಗುವ ರಾಸಾಯನಿಕ ಕ್ರಿಯೆ. ಇದರಿಂದ ಆಹಾರ ಪರಿವರ್ತನೆಯಾಗಿ ದೇಹ ಬೆಳವಣಿಗೆಗೆ ಅಥವಾ ಒಂದು ಜೀವಿಗೆ ಬದುಕುವುದಕ್ಕೆ ಬೇಕಾದ ಶಕ್ತಿ ಬಿಡುಗಡೆ ಆಗುತ್ತದೆ.

Metamorphic Rock

ರೂಪಾಂತರ ಶಿಲೆ.
ಹೆಚ್ಚಿನ ಬದಲಾವಣೆ ಹೊಂದಿದ ನಂತರ ನಿಯೋಜಿತ ವಸ್ತುವಿನಿಂದ ಕೂಡಿರುವ ಶಿಲೆ, ಅಗ್ನಿಶಿಲೆ ಮತ್ತು ಗಸಿಕಲ್ಲುಗಳು ಭೂಗರ್ಭ ಕ್ರಿಯೆಗಳ ಕಾರಣದಿಂದ ರೂಪಾಂತರ ಶಿಲೆಯಾಗಿ ಮಾರ್ಪಾಡಾಗುತ್ತವೆ.

Mho’s Scale of Hardness

ಮೋರವರ ಗಡುಸು ಶ್ರೇಣಿ; ಮೋರವರ ಕಾಠಿಣ್ಯ ಶ್ರೇಣಿ.
ಖನಿಜಗಳಿಗೆ ಘರ್ಷಣೆ ಅಥವಾ ಕೊರೆತವನ್ನು ತಡೆಯಲು ಇರುವ ಶಕ್ತಿಗೆ ಬಿಗಿತ, ಕಠಿಣತೆ ಎನ್ನುತ್ತಾರೆ. ಮೋರವರ ಖನಿಜಗಡುಸು ಅಥವಾ ಬಿಗಿಶ್ರೇಣಿ ಕೆಳಗಿನಂತಿದೆ :
1) ಟಾಲ್ಕ್ 2) ಜಿಪ್ಸಮ್ 3) ಕ್ಯಾಲ್ಸೈಟ್
4) ಫೆಲ್ ಸ್ಟಾರ್ 5) ಅಪಟೈಟ್ 6) ಬೆಣಚು
7) ಟೋಪಾಜ್ 8) ಕೊರಂಡ 9) ವಜ್ರ.
< previous123Next >

Search Dictionaries

Loading Results

Follow Us :   
  Download Bharatavani App
  Bharatavani Windows App