भारतीय भाषाओं द्वारा ज्ञान

Knowledge through Indian Languages

Dictionary

Krishi Rasayanashastra Shabdartha Nirupanavali (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Bulk Specific Gravity

ಸ್ಥೂಲ ವಿಶಿಷ್ಟ ಸಾಂದ್ರತೆ.
ಮಣ್ಣಿನ ಸ್ಥೂಲಸಾಂದ್ರತೆಗೂ ಮತ್ತು ಅದೇ ಗಾತ್ರದ ನೀರಿನ ಪರಿಮಾಣಕ್ಕೂ ಇರುವ ಪರಸ್ಪರ ಸಂಬಂಧ.

Burried Profile

ಹೂತಪ್ರೊಫೈಲ್.
ಮಣ್ಣು ಕೊರೆಯುವಿಕೆಯಿಂದಾಗಿ, ಅಕ್ಕ ಪಕ್ಕದ ಮಣ್ಣಿನ ವಸ್ತುಗಳು ಚಲಿಸಿ ಬಂದು ಶೇಖರವಾಗಿ ಮುಚ್ಚಿಹೋಗಿರುವ, ಒಂದು ಮಣ್ಣಿನ ಸಾಮಾನ್ಯ ಪ್ರೊಫೈಲ್.

Caliche

ಕ್ಯಾಲಿಚಿ.
ಮಣ್ಣಿನಲ್ಲಿ, ಕ್ಯಾಲ್ಸಿಯಂ ಕಾರ್ಬೊನೇಟ್ ಅಥವಾ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಂ ಕಾರ್ಬೊನೇಟ್ ಗಳ ಮಿಶ್ರಣವುಳ್ಳ ಗಟ್ಟಿಪದರ. ಇದು ಮರಳುಗಾಡು, ಉಷ್ಣವಲಯ ಮತ್ತು ಕಡಿಮೆ ಮಳೆಯಾಗುವ ಪ್ರದೇಶಗಳಲ್ಲಿ ಕಂಡುಬರುತ್ತದೆ.

Calorie

ಕ್ಯಾಲೋರಿ
ಉಷ್ಣವನ್ನು ಅಳೆಯುವ ಏಕಮಾನ. ಒಂದು ಗ್ರಾಂ ತೂಕದ ನೀರಿನ ಉಷ್ಣತೆಯನ್ನು 1°C ಗೆ ಏರಿಸಲು ಬೇಕಾಗುವ ಶಾಖವು, ಒಂದು ಕ್ಯಾಲೋರಿಗೆ ಸಮನಾಗಿರುತ್ತದೆ.

Calcareous Soil

ಸುಣ್ಣದ ಮಣ್ಣು.
ಈ ಮಣ್ಣು ಕ್ಯಾಲ್ಸಿಯಂ ಕಾರ್ಬೋನೇಟನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿದ್ದು, ಕ್ಷಾರೀಯ ಗತಿಯ ಅಂದರೆ 7.0 ಗಿಂತಲೂ ಹೆಚ್ಚು ಪಿ.ಎಚ್. ಅನ್ನು ಹೊಂದಿರುತ್ತದೆ. ದುರ್ಬಲ ಹೈಡ್ರೊಕ್ಲೋರಿಕ್ ಆಮ್ಲದೊಡನೆ ಈ ಮಣ್ಣು ಉಕ್ಕುತ್ತದೆ.

Calcification

ಕ್ಯಾಲ್ಸಿಫಿಕೇಷನ್; ಸುಣ್ಣ ಶೇಖರವಾಗುವಿಕೆ.
ಇದು ಮಣ್ಣು ಉತ್ಪತ್ತಿಯಾಗುವ ಒಂದು ವಿಧಾನವಾಗಿದೆ. ಮೇಲ್ಮಣ್ಣು ಸಾಕಷ್ಟು ಸುಣ್ಣದಂಶವನ್ನು ಹೊಂದಿರುತ್ತದೆ.

Calcium Cyanamide

ಕ್ಯಾಲ್ಸಿಯಂ ಸೈನಮೈಡ್.
ಶೇಕಡ 20 ರಷ್ಟು ಸಾರಜನಕವುಳ್ಳ ಈ ವಸ್ತು, ಮಾರುಕಟ್ಟೆಯಲ್ಲಿ ಸಿಗುವ ಒಂದು ರಾಸಾಯನಿಕ ಗೊಬ್ಬರ.

Capillary Water

ಲೋಮನಾಳ ಜಲ.
ಮೇಲು ಮಣ್ಣಿನ ಒತ್ತಡದ ಜಲಗಳ ಪರಿಣಾಮವಾಗಿ, ಮಣ್ಣಿನ ಸೂಕ್ಷ್ಮ ಕಣಾಂತರಗಳಲ್ಲಿ ಮತ್ತು ಕಣಗಳ ಸುತ್ತ ಪೊರೆಯಂತೆ ಕಂಡುಬರುವ ನೀರು.

Capillary Potential

ಲೋಮನಾಳ ಸ್ಥಾನಶಕ್ತಿ.
ಒಂದು ಮಣ್ಣಿನ ಸ್ತಂಭದಲ್ಲಿ ಸ್ವಾಭಾವಿಕ ಜಲಮಟ್ಟದಿಂದ ಮೇಲಕ್ಕೆ ಒಂದು ಗೊತ್ತಾದ ನಿಲುವಿಗೆ, ಒಂದು ನಿರ್ದಿಷ್ಟ ಪ್ರಮಾಣದ ನೀರನ್ನು ಏರಿಸಲು ಬೇಕಾಗುವ ಸಾಮರ್ಥ್ಯ ಅಥವಾ ಶ್ರಮ.

Carbon Cycle

ಇಂಗಾಲದ ಚಕ್ರ.
ಇಂಗಾಲದ ಜೀವಿಗಳಿಂದ ಬಳಸಲ್ಪಟ್ಟು, ಅವುಗಳ ಶರೀರದ ಅಂಗವಾಗಿ ಇದ್ದು, ಅವು ಸತ್ತ ನಂತರ ವಿಘಟನೆಯಾಗಿ ಮೊದಲಿನ ಸ್ಥಿತಿಗೆ ಬರುವ ಕ್ರಿಯೆಗೆ ಇಂಗಾಲದ ಚಕ್ರ ಎಂದು ಹೆಸರು.

Cartographic Unit

ನಕ್ಷಾ ವಿಭಾಗ; ನಕ್ಷಾ ಮಾಪಕ.
ಬೇರೆ ಬೇರೆ ರೀತಿಯ ಜಮೀನುಗಳನ್ನು ವರ್ಗೀಕರಿಸುವಾಗ, ಅವುಗಳ ವ್ಯತ್ಯಾಸವನ್ನು ನಕ್ಷೆಯಲ್ಲಿ ಗುರುತಿಸಲು ಅನುಸರಿಸುವ ಸಂಸ್ಥಾವಿಭಾಗ.

Catabolism

ಜೈವಿಕ ವಿಘಟನಾಕ್ರಿಯೆ.
ಆಹಾರಾಂಶಗಳ ವಿಘಟನೆಯ ಫಲವಾಗಿ ಇಂಗಾಲದ ಡೈಆಕ್ಸೈಡ್, ನೀರು ಮತ್ತು ಶಕ್ತಿಗಳು ಹೊರಬರುವ ರಾಸಾಯನಿಕ ಬದಲಾವಣೆ.

Catalyst

ವೇಗ ನಿಯಂತ್ರಕ; ಕೆಟಲಿಸ್ಟ್.
ತಾನು ಯಾವುದೇ ಬದಲಾವಣೆಯನ್ನು ಹೊಂದದೆ, ರಾಸಾಯನಿಕ ಕ್ರಿಯೆಯ ವೇಗವನ್ನು ತೀವ್ರಗೊಳಿಸುವ ಅಥವಾ ಕಡಿಮೆ ಮಾಡುವ ವಸ್ತುವಿಗೆ ವೇಗ ನಿಯಂತ್ರಕ ಎಂದು ಹೆಸರು.

Cathode

ಋಣಾಗ್ರ.
ವಿದ್ಯುತ್ ವಿಭಜನೆಯಿಂದ ವಿದ್ಯುತ್ ಹೊರಗೆ ಬರುವ ಧೃವ.

Cat-ion

ಧನ ಅಯಾನ್.
ಧನ ವಿದ್ಯುತ್ ಹೊಂದಿರುವ ಕಣ.

Cat-ion Exchange Capacity

ಧನ ಅಯಾನ್ ವಿದ್ಯುತ್ ಕಣ ವಿನಿಮಯ ಸಾಮರ್ಥ್ಯ.
ಧನ ವಿದ್ಯುತ್ ಕಣಗಳನ್ನು ವಿನಿಮಯ ರೂಪದಲ್ಲಿ ಉಳಿಸಿಕೊಳ್ಳಬಲ್ಲ ಮಣ್ಣಿನ ಸಾಮರ್ಥ್ಯ.

Chernozem Soils

ಚೆರ್ನೊಜೆಮ್ ಮಣ್ಣುಗಳು; ಎರೆಮಣ್ಣುಗಳು.
ಜೋನಲ್ ಪಂಗಡಕ್ಕೆ ಸೇರಿದ ಈ ಮಣ್ಣಿನ ಮೇಲ್ಪದರ ಕಪ್ಪಾಗಿದ್ದು, ತಳ ಭಾಗದಲ್ಲಿ ಸುಣ್ಣ ಶೇಖರವಾಗಿ ಅದರ ಪದರ ನಿರ್ಮಾಣವಾಗಿರುತ್ತದೆ.

Charle’s Law

ಚಾರ್ಲ್ಸ್ ನ ನಿಯಮ.
ಒತ್ತಡವನ್ನು, ನಿಯತವಾಗಿಟ್ಟು ಒಂದು ನಿರ್ದಿಷ್ಟ ಜಡತ್ವ ಅನಿಲದ ಉಷ್ಣವನ್ನು 1°C ಹೆಚ್ಚಿಸಿದರೆ, ಅದರ ಗಾತ್ರವು 0°C ನಲ್ಲಿ ಅದು ಹೊಂದಿದ್ದ ಗಾತ್ರದ ಒಂದು ನಿರ್ದಿಷ್ಟ ಭಿನ್ನಾಂಶದಷ್ಟು ಹೆಚ್ಚಿರುತ್ತದೆ ಎಂದು ತಿಳಿಸುವ ನಿಯಮ.

Chemical Affinity

ರಾಸಾಯನಿಕ ಆಕರ್ಷಣೆ.
ಒಂದು ಮೂಲವಸ್ತುವು ಬಿಟ್ಟುಕೊಡುವ ಅಥವಾ ಸೇರಿಸಿಕೊಳ್ಳುವ ಋಣಾಂಶಗಳು ಕಡಿಮೆ ಇದ್ದಂತೆಲ್ಲಾ ರಾಸಾಯನಿಕ ಆಕರ್ಷಣೆ ಹೆಚ್ಚಾಗಿರುತ್ತದೆ.

Chemical Bond

ರಾಸಾಯನಿಕ ಬಂಧನ.
ಎರಡು ಪರಮಾಣುಗಳಿಂದ ಹಿಡಿದಿಡಲ್ಪಟ್ಟಿರುವ ಒಂದು ಜೊತೆಯ ಋಣಾಂಶಗಳು (ಇಲೆಕ್ಟ್ರಾನ್ ಗಳು).

Search Dictionaries

Loading Results

Follow Us :   
  Download Bharatavani App
  Bharatavani Windows App