भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಅಗೆ

ಬಿತ್ತನೆ ಮಾಡಿದ ಭತ್ತ

ಅಗೆಹಾಕು

ನಾಟಿಗಾಗಿ ಭತ್ತವನ್ನು ಬಿತ್ತುವುದು.

ಅಗ್ತೆ

ಬೇರುಗಳಿಗೆ ಗಾಳಿಯಾಡುವಂತೆ ಮಣ್ಣನ್ನು ಅಗೆದು ಅಡಿಮೇಲು
ಮಾಡುವುದು.

ಅಗೇಡಿ

ಅಗಡಿ

ಅಚ್ಚಕ್ಕಿ

ಇಡಿ ಅಕ್ಕಿ, ತುಂಡಾಗದ ಅಕ್ಕಿಕಾಳು.

ಅಚ್ಗಟ್ಟು

ಅಚ್ಚುಕಟ್ಟು, ಒಪ್ಪ ಓರಣ,

ಅಚಿಗೆ

ಆ ಕಡೆಗೆ, ಆ ಪಕ್ಕಕ್ಕೆ, ಹೊರಗೆ.

ಅಚಿಗಿಚಿಗೆ

ಎರಡು ಕಡೆ, ಅಕ್ಕಪಕ್ಕ

ಅಚ್ಚಿನ ಮರ

ಗುಂಬದ ಮರ, ಇಡೀ ಗಾಡಿಯ ಭಾರವನ್ನು ಹೊರುವ ಮಧ್ಯದ
ಅಡ್ಡಮರ ಅದರೊಳಗಿಂದ ಕಬ್ಬಿಣದ ಸಬ್ಬಲ್ಲು ತೂರಿಸಿರುತ್ತಾರೆ.

ಅಚ್ಚು

ಎರಕದ ವಸ್ತು

ಅಚ್ಚು

ಪಡಿಯಚ್ಚು ತದ್ರೂಪಿ.

ಅಚ್ಚುಕಟ್ಟು

ಅಚ್ಗಟ್ಟು

ಅಚ್ಚುಕಟ್ಟು

ನೀರಾವರಿ ಭೂಮಿಯ ಪರಿಮಿತಿ

ಅಚ್ಚಮೆಚ್ಚು

ಅತಿಶಯವಾದ ಪ್ರೀತಿ.

ಅಚೆಮನೆ

ಆಚೆಮನೆ, ಪಕ್ಕದ ಮನೆ, ಆ ಕಡೆಗಿರುವ ಮನೆ.

ಅಚೇನಾಡ್ದು

ನಾಳೆಯಲ್ಲ, ನಾಡಿದ್ದಿನ ಮರುದಿನ.

ಅಚೇಮನ್ನೆ

ಮೊನ್ನೆಯ ಹಿಂದಿನ ದಿನ.

ಅಚ್ಚೇರು

ಅರ್ಧಸೇರು, ಎರಡುಪಾವು, ಒಂದು ಅಳತೆ.

ಅಚ್ಚೊತ್ತು

ಮುದ್ರೆಯೊತ್ತು, ಅಂಕಿತ ಹಾಕು.

ಅಜಗಜಾಂತರ

ರೂಪ /ಗುಣದಲ್ಲಿ ಮಾಡುವ ಹೋಲಿಕೆ

Search Dictionaries

Loading Results

Follow Us :   
  Download Bharatavani App
  Bharatavani Windows App